ಸಾವಯವ ಲೋಹೀಯ ಸಂಯುಕ್ತಗಳು

	ಒಂದು ಅಥವಾ ಹೆಚ್ಚು ಲೋಹ ಪರಮಾಣುಗಳು ಮತ್ತು ಒಂದು ಅಥವಾ ಹೆಚ್ಚು ಕಾರ್ಬನ್ ಪರಮಾಣುಗಳ ನಡುವೆ ಬಂಧವೇರ್ಪಟ್ಟು ರೂಪುಗೊಳ್ಳುವ ರಾಸಾಯನಿಕ ಸಂಯುಕ್ತಗಳು(ಆಗ್ರ್ಯಾನೊಮೆಟ್ಯಾಲಿಕ್ ಕಾಂಪೌಂಡ್ಸ್). ಅರ್ಥಾತ್, ಈ ಸಂಯುಕ್ತಗಳಲ್ಲಿ ಕನಿಷ್ಠ ಒಂದಾದರೂ ಲೋಹ-ಕಾರ್ಬನ್ ಬಂಧವಿರುತ್ತದೆ. ಸಂಯುಕ್ತದ ಕಾರ್ಬನ್ ಭಾಗ ಯಾವುದಾದರೂ ಕಾರ್ಬನಿಕ (ಆಗ್ರ್ಯಾನಿಕ್) ಸಂಯುಕ್ತದ ಭಾಗವಾಗಿರುವುದರಿಂದ ಈ ಹೆಸರು. ಎಂದೇ, ಈ ಸಂಯುಕ್ತಗಳ ಹೆಸರುಗಳಲ್ಲಿ ಆಗ್ರ್ಯಾನೊ ಎಂಬ ಪೂರ್ವಪ್ರತ್ಯಯವಿರುತ್ತದೆ (ಉದಾ: ಆಗ್ರ್ಯಾನೊಪೆಲೇಡಿಯಮ್ ಸಂಯುಕ್ತಗಳು). ಆದೇಶಿತ ಲೋಹಗಳೆಂದು  ಇವನ್ನು ಹೆಸರಿಸುವುದೂ ಉಂಟು (ಉದಾ: ಆಲ್ಕೈಲ್ ಲೋಹ ಅಥವಾ ಆಲ್ಕೈಲ್ ಲೋಹ ಹ್ಯಾಲೈಡ್; ಮೀಥೈಲ್ ಲೀಥಿಯಮ್). ಕಾರ್ಬನಿಕ ಮತ್ತು ಅಕಾರ್ಬನಿಕ ಸಂಯುಕ್ತಗಳಿಂದ ಇವು ಭಿನ್ನವಾದವು ಎಂದು ಕೆಲವು ರಸಾಯನವಿಜ್ಞಾನಿಗಳು ಪರಿಗಣಿಸುತ್ತಾರೆ. 

	ಆಗ್ರ್ಯಾನೊಮೆಟ್ಯಾಲಿಕ್ ಸಂಯುಕ್ತಗಳನ್ನು ಮೊದಲು ತಯಾರಿಸಿದವ(1900) ಫ್ರೆಂಚ್ ರಸಾಯನವಿಜ್ಞಾನಿ ಫ್ರ್ಯಾಂಕಾಯಿಸ್ ಆಗಸ್ಟೆ ವಿಕ್ಟರ್ ಗ್ರಿನ್ಯಾರ್ಡ್ (1871-1935). ಇವಕ್ಕೆ ಗ್ರಿನ್ಯಾರ್ಡ್ ಕ್ರಿಯಾಕಾರಿಗಳು ಎಂದೇ ಹೆಸರು. ಇವುಗಳ ಸಾರ್ವತ್ರಿಕ ಸೂತ್ರ ಖಒgಘಿ  (ಘಿ: ಆಗ್ರ್ಯಾನಿಕ್ ಆಲ್ಕೈಲ್ ಗುಂಪು, ಖ: ಹ್ಯಾಲೊಜೆನ್). ಉದಾ: ಈಥೈಲ್‍ಮೆಗ್ನೀಸಿಯಮ್ ಬ್ರೋಮೈಡ್ (ಅ2ಊ5ಒgಃಡಿ). ಈಥರ್‍ನಲ್ಲಿ ಹ್ಯಾಲೊಆಲ್ಕೇನ್ ಮತ್ತು ಮೆಗ್ನೀಸಿಯಮ್‍ಗಳ ವರ್ತನೆಯಿಂದ ಇವುಗಳ ತಯಾರಿ. ಕಾರ್ಬನ್-ಮೆಗ್ನೀಸಿಯಮ್ ಬಂಧ ಬಲು ಧ್ರುವೀಯವಾಗಿರುವುದರಿಂದ ಈ ಸಂಯುಕ್ತಗಳು ಖ- ಅಯಾನುಗಳು ಇರುವ ಸಂಯುಕ್ತಗಳೋಪಾದಿಯಲ್ಲಿ ವರ್ತಿಸುತ್ತವೆ. ಬಲು ಕ್ರಿಯಾಶೀಲ ಕ್ರಿಯಾಕಾರಿಗಳು ಇವಾದ್ದರಿಂದ ಅನೇಕ ಕಾರ್ಬನಿಕ ಸಂಯುಕ್ತಗಳ ತಯಾರಿಯಲ್ಲಿ ಬಳಕೆ ಇದೆ. 1950ರ ದಶಕದಲ್ಲಿ ಸಂಕ್ರಮಣ ಲೋಹಗಳುಳ್ಳ ಆಗ್ರ್ಯಾನೊಮೆಟ್ಯಾಲಿಕ್ ಸಂಯುಕ್ತಗಳ ತಯಾರಿ ಆರಂಭವಾಯಿತು. ಎರಡು ಕಾರ್ಬನಿಕ ರಿಂಗುಗಳ ನಡುವೆ ಒಂದು ಲೋಹ ಪರಮಾಣುವಿರುವ ಸ್ಯಾಂಡ್‍ವಿಚ್ ಸಂಯುಕ್ತಗಳು ಈ ಗುಂಪಿನವು. ಇವುಗಳ ಪೈಕಿ, ಎರಡು ಸೈಕ್ಲೊಪೆಂಟಡೈಯಿನೈಲ್ (ಅ5ಊ5) ರಿಂಗುಗಳ ನಡುವೆ ಒಂದು ಕಬ್ಬಿಣ ಪರಮಾಣು ಉಳ್ಳ ಫೆರ್ರೊಸೀನ್ ಬಲು ಸ್ಥಿರ ಸಂಯುಕ್ತ. ಋಣಾವಿಷ್ಟ ರಿಂಗುಗಳ ನಡುವೆ ಈe2+ ಅಯಾನು ಇರುವುದು (ಖ-ಒ+ಖ-) ಇದರ ವೈಶಿಷ್ಟ್ಯ. ಈ ನಮೂನೆಯ ಅನೇಕ ಸಂಯುಕ್ತಗಳಿವೆ.

	ಎಲೆಕ್ಟ್ರೊಪ್ರಿಯ ಕಾರ್ಬನಿನೊಂದಿಗೆ ವರ್ತಿಸಬಲ್ಲ ನ್ಯೂಕ್ಲಿಯೊಪ್ರಿಯ ಕಾರ್ಬನ್ ಪರಮಾಣುಗಳನ್ನು ಆಗ್ರ್ಯಾನೊಮೆಟ್ಯಾಲಿಕ್ ಸಂಯುಕ್ತಗಳು ಒದಗಿಸಿ ಹೊಸ ಕಾರ್ಬನ್-ಕಾರ್ಬನ್ ಬಂಧ ರೂಪಿಸುತ್ತವೆ. ಸರಳ ಆರಂಭಿಕ ಪದಾರ್ಥಗಳಿಂದ ಸಂಕೀರ್ಣ ಅಣುಗಳನ್ನು ಸಂಶ್ಲೇಷಿಸಲು ಈ ಗುಣ ಬಲು ಉಪಕಾರಿ.

	ಆಗ್ರ್ಯಾನೊಮೆಟ್ಯಾಲಿಕ್ ಸಂಯುಕ್ತಗಳಿಗೆ ಅಸಾಧಾರಣ ಉಪಯೋಗಗಳಿವೆ. ಅವುಗಳ ಪೈಕಿ ಕೆಲವು ಇಂತಿವೆ:
	1. ಟೆಟ್ರಈಥೈಲ್-ಸೀಸ ((ಅ2ಊ5)4Pb): ಸೀಸಯುಕ್ತ ಪೆಟ್ರೋಲಿಗೆ ಬೆರೆಸುವ ವಿಸ್ಫೋಟ ವಿರೋಧಕ.
	2. ಆಗ್ರ್ಯಾನೊಲೀಥಿಯಮ್ ಮತ್ತು ಆಗ್ರ್ಯಾನೊಅಲ್ಯೂಮಿನಿಯಮ್ ಸಂಯುಕ್ತಗಳು:   ಪಾಲಿಮರೀಕರಣ ಕ್ರಿಯೆಗಳಲ್ಲಿ ಕ್ರಿಯಾವರ್ಧಕಗಳು.
	3. ಟ್ರೈಈಥೈಲ್‍ಅಲ್ಯೂಮಿನಿಯಮ್ ((ಅ2ಊ5)3ಂಟ): ಪಾಲಿಥೀನ್, ಪಾಲಿಪ್ರೊಪೀನ್ ಮುಂತಾದವುಗಳ ಉತ್ಪಾದನೆಯಲ್ಲಿ ಬಳಸುವ ವಿಶಿಷ್ಟ ಕ್ರಿಯಾವರ್ಧಕದ ಘಟಕ.
	4. ಜೀವವೈಜ್ಞಾನಿಕ ಮಹತ್ತ್ವವುಳ್ಳ ಅನೇಕ ಅಣುಗಳು ಆಗ್ರ್ಯಾನೊಮೆಟ್ಯಾಲಿಕ್‍ಗಳು. ಉದಾ: ಹರಿತ್ತು (ಕ್ಲೋರೊಫಿಲ್);  ಹೀಮೊಗ್ಲಾಬಿನ್; ಜೀವಸತ್ತ್ವ ಃ12.								
	(ಕೆ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ